ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ॥
ವೈದಿಕ ಪಂಚಾಂಗ ಮಾಹಿತಿ
ಇತ್ತೀಚಿನ ಸುದ್ದಿ ಮತ್ತು ಕಾರ್ಯಕ್ರಮಗಳು
ದೇವರ ಸನ್ನಿಧಿಯಲ್ಲಿ ನಿಮ್ಮ ಸೇವೆ ಸಲ್ಲಿಸಿ
ನಿರಂತರ ಸೇವೆ ಎಂದರೆ ಪ್ರತಿವರ್ಷವೂ ಆಯ್ಕೆ ಮಾಡಿಕೊಂಡ ದಿನದಲ್ಲಿ ದೇವಾಲಯದಲ್ಲಿ ಪೂಜೆ ನಡೆಸುವ ಶಾಶ್ವತ ಪೂಜಾ ಸೇವೆ ವ್ಯವಸ್ಥೆ. ಈ ದಿನವನ್ನು ಪಂಚಾಂಗದ ಮಾಸ, ತಿಥಿ ಅಥವಾ ಇಂಗ್ಲಿಷ್ ಕ್ಯಾಲೆಂಡರ್ ದಿನಾಂಕದ ಮೂಲಕ ಆಯ್ಕೆ ಮಾಡಬಹುದು.
ಒಂದು ದಿನದ ಸೇವೆ ಎಂದರೆ ಆಯ್ಕೆ ಮಾಡಿಕೊಂಡ ದಿನದಲ್ಲಿ ದೇವಾಲಯದಲ್ಲಿ ಪೂಜೆ ನಡೆಸುವ ವ್ಯವಸ್ಥೆ. ಈ ದಿನವನ್ನು ಪಂಚಾಂಗದ ಸಂವತ್ಸರ, ಮಾಸ, ತಿಥಿ ಅಥವಾ ಇಂಗ್ಲಿಷ್ ಕ್ಯಾಲೆಂಡರ್‌ನ ದಿನಾಂಕದಿಂದ ಆಯ್ಕೆ ಮಾಡಬಹುದು.
ದೇವಸ್ಥಾನದ ಅಭಿವೃದ್ಧಿಗೆ ನಿಮ್ಮ ಕೊಡುಗೆ ನೀಡಿ
ದೇವಸ್ಥಾನದ ಜೀರ್ಣೋದ್ಧಾರ ಅಭಿವೃದ್ಧಿ ಹಾಗೂ ದೈನಂದಿನ ಕೈಂಕರ್ಯಗಳಿಗೆ ನಿಮ್ಮ ಉದಾರ ದೇಣಿಗೆ ನೀಡಿ ದೇವಿಯ ಕೃಪೆಗೆ ಪಾತ್ರರಾಗಿ.

ಇತಿಹಾಸ, ಸಂಸ್ಕೃತಿ ಮತ್ತು ಆಚರಣೆ
ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್ ಒಂದು ಸರ್ಕಾರದಿಂದ ಮಾನ್ಯತೆ ಪಡೆದ ರಿಜಿಸ್ಟರ್ಡ್ ಟ್ರಸ್ಟ್ (Reg ID: KPP-4-00034-2024-25) ಆಗಿದ್ದು, ಇದರ ಮುಖ್ಯ ಉದ್ದೇಶವು ವಿಶ್ವನಾಥಪುರ ಅಗ್ರಹಾರ ದೇವರ ಪೂಜೆಯನ್ನು ಇಂದಿನ ಪೀಳಿಗೆಯಿಂದ ಆರಂಭಿಸಿ ಮುಂದಿನ ಪೀಳಿಗೆಗಳಿಗೆ ನಿರಂತರವಾಗಿ ಮುಂದುವರಿಸುವುದಾಗಿದೆ.
ಈ ಟ್ರಸ್ಟ್ ದೇವಾಲಯದ ಪೂಜಾ ಸೇವೆಗಳನ್ನು ಸಮರ್ಪಕವಾಗಿ ನಿರ್ವಹಿಸಲು, ಆಚಾರ-ವಿಚಾರಗಳನ್ನು ಸ್ಥಾಪಿಸಲು ಮತ್ತು ದೇವರ ಸೇವೆಯನ್ನು ಶ್ರದ್ಧೆ ಹಾಗೂ ಸಮರ್ಪಣೆಯೊಂದಿಗೆ ಮುಂದುವರಿಸಲು ಬದ್ಧವಾಗಿದೆ.
ಪವಿತ್ರ ತುಂಗಾ ನದಿಯ ತಟದಲ್ಲಿರುವ ವಿಶ್ವನಾಥಪುರ ಅಗ್ರಹಾರದಲ್ಲಿ ಈಶ್ವರ, ಶ್ರೀದುರ್ಗಾಪರಮೇಶ್ವರಿ, ಶ್ರೀಬೀದಿ ಗಣಪತಿ, ಶ್ರೀಉಧ್ಬವ ಗಣಪತಿ, ಶ್ರೀಆಂಜನೇಯ ಸ್ವಾಮಿ, ಶ್ರೀವೆಂಕಟರಮಣ ಸ್ವಾಮಿ, ಶ್ರೀಗಂಗಾವಿಶ್ವೇಶ್ವರ ದೇವಾಲಯಗಳಿರುತ್ತದೆ.
ಅಗ್ರಹಾರವು ಶೃಂಗೇರಿಯಿಂದ 12 ಕಿಲೋಮೀಟರ್ ಮತ್ತು ಕೊಪ್ಪದಿಂದ 16 ಕಿಲೋಮೀಟರ್ ದೂರದಲ್ಲಿದೆ.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ತುಂಗಾನದಿಯ ತೀರದಲ್ಲಿ ಅನೇಕ ಅಗ್ರಹಾರಗಳನ್ನು ನಿರ್ಮಿಸಲಾಯಿತು — ಪ್ರತಿಯೊಂದು ಅಗ್ರಹಾರವು ವೇದ ಪಾಠ, ಧರ್ಮಚಟುವಟಿಕೆ, ನ್ಯಾಯದಾನಗಳ ಕೇಂದ್ರವಾಗಿತ್ತು. ವಿಶ್ವನಾಥಪುರವೂ ಅಂಥದೇ ಒಂದು ಪುರಾತನ ಅಗ್ರಹಾರ, ಸುಮಾರು 700–800 ವರ್ಷದ ಹಳೆಯದು ಎಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಶ್ರೀ ವೆಂಕಟರಮಣಸ್ವಾಮಿ, ಶ್ರೀ ಗಂಗಾವಿಶ್ವೇಶ್ವರ, ಹಾಗೂ ದುರ್ಗಾ ಪರಮೇಶ್ವರಿ ದೇವಾಲಯಗಳು ಇದ್ದವು. ವಿಷ್ಣು ಮತ್ತು ಶಿವನ ದೇಗುಲಗಳು ಒಂದೇ ಅಗ್ರಹಾರದಲ್ಲಿ ಇರುವುದೇ ಈ ಸ್ಥಳದ ವಿಶೇಷತೆ. ವಿಜಯನಗರ ಅರಸರ ಕಾಲದಲ್ಲಿ ಈ ದೇಗುಲಗಳನ್ನು ಪುನಃ ನಿರ್ಮಿಸಲಾಯಿತು. ನಂತರ ಕಾರ್ಕಳದ ರಾಣಿ ಈ ಅಗ್ರಹಾರಕ್ಕೆ ದಾನ ನೀಡಿದ್ದಳು. ಕಾಲಕ್ರಮೇಣ ರಾಜರು, ಸಾಮಂತರು ಇಲ್ಲದಾದ ಬಳಿಕ ಹಾಗೂ ಭೂಸುಧಾರಣೆ ಕಾಯ್ದೆ ಜಾರಿಗೆ ಬಂದ ನಂತರ ಅಗ್ರಹಾರಗಳ ಭೂಮಿ ಖಾಸಗಿ ಹಸ್ತಕ್ಕೆ ಹೋಗಿ, ಅನೇಕ ಅಗ್ರಹಾರಗಳು ಪಾಳುಬಿದ್ದುವು.
ವಿಶ್ವನಾಥಪುರ ಕುಟುಂಬವು ಪೀಳಿಗೆಗಳಿಂದ ದೇಗುಲದ ಪೂಜೆ ಹಾಗೂ ನವರಾತ್ರಿ ಉತ್ಸವವನ್ನು ನಡೆಸುತ್ತ ಬಂದಿದೆ. ನವರಾತ್ರಿ ಸಮಯದಲ್ಲಿ ದುರ್ಗಾಪರಮೇಶ್ವರಿ ದೇವಿಯ ದರ್ಶನ ಮಾತ್ರ ಲಭ್ಯ — ಮದುವೆ ಆಗದವರು ಇಲ್ಲಿ ಹರಕೆ ಹೇಳಿಕೊಂಡರೆ ಮದುವೆ ಆಗುತ್ತದೆ ಎಂಬ ನಂಬಿಕೆ ಇದೆ. ಹಿಂದೆ ಈ ಅಗ್ರಹಾರದಲ್ಲಿ ವೇದ ಪಾಠಶಾಲೆ, ಗುರುಕುಲ ವ್ಯವಸ್ಥೆ, ಮತ್ತು ಅನ್ನದಾನ ನಡೆಯುತ್ತಿತ್ತು. ಅಗ್ರಹಾರದ ಸುತ್ತಮುತ್ತ ಹಳೆಯ ವೈದಿಕ ಮನೆಗಳ ಅವಶೇಷಗಳು, ಮರದ ಮನೆಗಳು ಹಾಗೂ ಪುರಾತನ ಶಿಲಾ ನಿರ್ಮಾಣಗಳ ಗುರುತುಗಳು ಕಾಣಿಸುತ್ತವೆ.
ಸಾರಾಂಶವಾಗಿ ವಿಶ್ವನಾಥಪುರ ಅಗ್ರಹಾರವು ವಿಜಯನಗರ ಕಾಲದ ಸಾಂಸ್ಕೃತಿಕ ಪರಂಪರೆಯ ಜೀವಂತ ಸಾಕ್ಷಿ; ಅದರ ದೇವಾಲಯಗಳು, ಪುರಾತನ ಸಂಸ್ಕೃತಿ, ಹಾಗೂ ಕುಟುಂಬದ ನಿಷ್ಠೆ ಇಂದಿಗೂ ಆ ಇತಿಹಾಸದ ಹೊಳಪನ್ನು ಉಳಿಸಿಕೊಂಡಿವೆ.









ನಮ್ಮನ್ನು ಸಂಪರ್ಕಿಸಲು ವಿವರಗಳು
ವಿಶ್ವನಾಥಪುರ ಅಗ್ರಹಾರ, ಉತ್ತಮೇಶ್ವರ ಅಂಚೆ, ಭುವನಕೋಟೆ ಗ್ರಾಮ, ಕೊಪ್ಪ ತಾಲೂಕು, ಚಿಕ್ಕಮಗಳೂರು - 577126
Google Maps ನಲ್ಲಿ ನೋಡಿ