Slideshow Image

ನಮ್ಮ ಬಗ್ಗೆ

ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್ ಒಂದು ಸರ್ಕಾರದಿಂದ ಮಾನ್ಯತೆ ಪಡೆದ ರಿಜಿಸ್ಟರ್ಡ್ ಟ್ರಸ್ಟ್(Reg ID: KPP-4-00034-2024-25) ಆಗಿದ್ದು, ಇದರ ಮುಖ್ಯ ಉದ್ದೇಶವು ವಿಶ್ವನಾಥಪುರ ಅಗ್ರಹಾರ ದೇವರ ಪೂಜೆಯನ್ನು ಇಂದಿನ ಪೀಳಿಗೆಯಿಂದ ಆರಂಭಿಸಿ ಮುಂದಿನ ಪೀಳಿಗೆಗಳಿಗೆ ನಿರಂತರವಾಗಿ ಮುಂದುವರಿಸುವುದಾಗಿದೆ. ಈ ಟ್ರಸ್ಟ್ ದೇವಾಲಯದ ಪೂಜಾ ಸೇವೆಗಳನ್ನು ಸಮರ್ಪಕವಾಗಿ ನಿರ್ವಹಿಸಲು, ಆಚಾರ-ವಿಚಾರಗಳನ್ನು ಸ್ಥಾಪಿಸಲು ಮತ್ತು ದೇವರ ಸೇವೆಯನ್ನು ಶ್ರದ್ಧೆ ಹಾಗೂ ಸಮರ್ಪಣೆಯೊಂದಿಗೆ ಮುಂದುವರಿಸಲು ಬದ್ಧವಾಗಿದೆ.

ಪವಿತ್ರ ತುಂಗಾ ನದಿಯ ತಟದಲ್ಲಿರುವ ವಿಶ್ವನಾಥಪುರ ಅಗ್ರಹಾರದಲ್ಲಿ ಈಶ್ವರ, ಶ್ರೀದುರ್ಗಾಪರಮೇಶ್ವರಿ, ಬೀದಿ ಗಣಪತಿ, ಉಧ್ಬವ ಗಣಪತಿ, ಆಂಜನೇಯ ಸ್ವಾಮಿ, ವೆಂಕಟರಮಣ ಸ್ವಾಮಿ ದೇವಾಲಯಗಳಿರುತ್ತದೆ. ಅಗ್ರಹಾರವು ಶೃಂಗೇರಿಯಿಂದ 12 ಕಿಲೋಮೀಟರ್ ಮತ್ತು ಕೊಪ್ಪದಿಂದ 16 ಕಿಲೋಮೀಟರ್ ದೂರದಲ್ಲಿದೆ. ಅಗ್ರಹಾರದ ಅರ್ಧ ಭಾಗ ಶೃಂಗೇರಿ ತಾಲೂಕಿಗೆ ಸೇರಿದ್ದು ಇನ್ನರ್ದ ಭಾಗ ಕೊಪ್ಪ ತಾಲೂಕಿಗೆ ಸೇರಿರುವುದು ವಿಶೇಷ.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ತುಂಗಾನದಿಯ ತೀರದಲ್ಲಿ ಅನೇಕ ಅಗ್ರಹಾರಗಳನ್ನು ನಿರ್ಮಿಸಲಾಯಿತು — ಪ್ರತಿಯೊಂದು ಅಗ್ರಹಾರವು ವೇದ ಪಾಠ, ಧರ್ಮಚಟುವಟಿಕೆ, ನ್ಯಾಯದಾನಗಳ ಕೇಂದ್ರವಾಗಿತ್ತು. ವಿಶ್ವನಾಥಪುರವೂ ಅಂಥದೇ ಒಂದು ಪುರಾತನ ಅಗ್ರಹಾರ, ಸುಮಾರು 700–800 ವರ್ಷದ ಹಳೆಯದು ಎಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಶ್ರೀ ವೆಂಕಟರಮಣಸ್ವಾಮಿ, ಶ್ರೀ ಗಂಗಾವಿಶ್ವೇಶ್ವರ, ಹಾಗೂ ದುರ್ಗಾ ಪರಮೇಶ್ವರಿ ದೇವಾಲಯಗಳು ಇದ್ದವು. ವಿಷ್ಣು ಮತ್ತು ಶಿವನ ದೇಗುಲಗಳು ಒಂದೇ ಅಗ್ರಹಾರದಲ್ಲಿ ಇರುವುದೇ ಈ ಸ್ಥಳದ ವಿಶೇಷತೆ. ವಿಜಯನಗರ ಅರಸರ ಕಾಲದಲ್ಲಿ ಈ ದೇಗುಲಗಳನ್ನು ಪುನಃ ನಿರ್ಮಿಸಲಾಯಿತು. ನಂತರ ಕಾರ್ಕಳದ ರಾಣಿ ಈ ಅಗ್ರಹಾರಕ್ಕೆ ದಾನ ನೀಡಿದ್ದಳು. ಕಾಲಕ್ರಮೇಣ ರಾಜರು, ಸಾಮಂತರು ಇಲ್ಲದಾದ ಬಳಿಕ ಹಾಗೂ ಭೂಸುಧಾರಣೆ ಕಾಯ್ದೆ ಜಾರಿಗೆ ಬಂದ ನಂತರ ಅಗ್ರಹಾರಗಳ ಭೂಮಿ ಖಾಸಗಿ ಹಸ್ತಕ್ಕೆ ಹೋಗಿ, ಅನೇಕ ಅಗ್ರಹಾರಗಳು ಪಾಳುಬಿದ್ದುವು. ವಿಶ್ವನಾಥಪುರ ಕುಟುಂಬವು ಪೀಳಿಗೆಗಳಿಂದ ದೇಗುಲದ ಪೂಜೆ ಹಾಗೂ ನವರಾತ್ರಿ ಉತ್ಸವವನ್ನು ನಡೆಸುತ್ತ ಬಂದಿದೆ. ನವರಾತ್ರಿ ಸಮಯದಲ್ಲಿ ದುರ್ಗಾಪರಮೇಶ್ವರಿ ದೇವಿಯ ದರ್ಶನ ಮಾತ್ರ ಲಭ್ಯ — ಮದುವೆ ಆಗದವರು ಇಲ್ಲಿ ಹರಕೆ ಹೇಳಿಕೊಂಡರೆ ಮದುವೆ ಆಗುತ್ತದೆ ಎಂಬ ನಂಬಿಕೆ ಇದೆ. ಹಿಂದೆ ಈ ಅಗ್ರಹಾರದಲ್ಲಿ ವೇದ ಪಾಠಶಾಲೆ, ಗುರುಕುಲ ವ್ಯವಸ್ಥೆ, ಮತ್ತು ಅನ್ನದಾನ ನಡೆಯುತ್ತಿತ್ತು. ಶೃಂಗೇರಿಯ ಮಠದಿಂದಲೂ ಅನುದಾನ ದೊರಕುತ್ತಿತ್ತು. ಈಗ ಆ ಅನುದಾನ ನಿಂತಿದ್ದರೂ ಕುಟುಂಬದವರು ಸ್ವಂತ ಖರ್ಚಿನಲ್ಲಿ ದೇಗುಲವನ್ನು ನಿರ್ವಹಿಸುತ್ತಿದ್ದಾರೆ. ಅಗ್ರಹಾರದ ಸುತ್ತಮುತ್ತ ಹಳೆಯ ವೈದಿಕ ಮನೆಗಳ ಅವಶೇಷಗಳು, ಮರದ ಮನೆಗಳು ಹಾಗೂ ಪುರಾತನ ಶಿಲಾ ನಿರ್ಮಾಣಗಳ ಗುರುತುಗಳು ಕಾಣಿಸುತ್ತವೆ. ವಿಶ್ವನಾಥಪುರ ಕುಟುಂಬವು ಈ ಅಗ್ರಹಾರವನ್ನು ಉಳಿಸಿಕೊಳ್ಳಲು ಟ್ರಸ್ಟ್ ಸ್ಥಾಪಿಸಿ ಪುನರುಜ್ಜೀವನದ ಪ್ರಯತ್ನ ಮಾಡುತ್ತಿದ್ದಾರೆ. ಸಾರಾಂಶವಾಗಿ ವಿಶ್ವನಾಥಪುರ ಅಗ್ರಹಾರವು ವಿಜಯನಗರ ಕಾಲದ ಸಾಂಸ್ಕೃತಿಕ ಪರಂಪರೆಯ ಜೀವಂತ ಸಾಕ್ಷಿ; ಅದರ ದೇವಾಲಯಗಳು, ಪುರಾತನ ಸಂಸ್ಕೃತಿ, ಹಾಗೂ ಕುಟುಂಬದ ನಿಷ್ಠೆ ಇಂದಿಗೂ ಆ ಇತಿಹಾಸದ ಹೊಳಪನ್ನು ಉಳಿಸಿಕೊಂಡಿವೆ.
Source credit: Deccan Herald



🪔 ಪೂಜಾ ಸೇವೆ

Popular

ನಿರಂತರ ಸೇವೆ

ನಿರಂತರ ಸೇವೆ ಆಯ್ದುಕೊಳ್ಳಬೇಕಾದಲ್ಲಿ ಮಾಸ ಮತ್ತು ತಿಥಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರತಿ ಸಂವತ್ಸರದ ಈ ಮಾಸ ಮತ್ತು ತಿಥಿಯಂದು ಪೂಜಾ ಸೇವೆ ನೆಡೆಸಿ ಪ್ರಸಾದ ಕಳುಹಿಸಿ ಕೊಡಲಾಗುತ್ತದೆ.ಪೂಜಾ ಸೇವೆಯಲ್ಲಿ ಎಷ್ಟು ಬೇಕಾದರೂ ಹೆಸರು-ರಾಶಿ-ನಕ್ಷತ್ರ ಸೇರಿಸಬಹುದು.

ಸೇವಾ ಮೊತ್ತ : ₹5000

ಒಂದುದಿನದ ಸೇವೆ

ಒಂದುದಿನದ ಸೇವೆ ಆಯ್ದುಕೊಳ್ಳಬೇಕಾದಲ್ಲಿ ಯಾವುದೇ ಒಂದು ಸಂವತ್ಸರದ ಯಾವುದೇ ಮಾಸದ ತಿಥಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಗದಿತ ಈ ದಿನದಂದು ಪೂಜಾ ಸೇವೆ ನೆಡೆಸಿ ಪ್ರಸಾದ ಕಳುಹಿಸಿ ಕೊಡಲಾಗುತ್ತದೆ. ಪೂಜಾ ಸೇವೆಯಲ್ಲಿ ಎಷ್ಟು ಬೇಕಾದರೂ ಹೆಸರು-ರಾಶಿ-ನಕ್ಷತ್ರ ಸೇರಿಸಬಹುದು.

ಸೇವಾ ಮೊತ್ತ : ₹500

ಮಾಸಿಕ ಸೇವೆ

ಮಾಸಿಕ ಸೇವೆ ಆಯ್ದುಕೊಳ್ಳಬೇಕಾದಲ್ಲಿ ಯಾವುದೇ ಒಂದು ಸಂವತ್ಸರದ ಒಂದು ಮಾಸಆಯ್ಕೆ ಮಾಡಿಕೊಳ್ಳಬೇಕು. ನಿಗದಿತ ಈ ಮಾಸವಿಡಿ ಪೂಜಾ ಸೇವೆ ನೆಡೆಸಿ ಪ್ರಸಾದ ಕಳುಹಿಸಿ ಕೊಡಲಾಗುತ್ತದೆ. ಪೂಜಾ ಸೇವೆಯಲ್ಲಿ ಎಷ್ಟು ಬೇಕಾದರೂ ಹೆಸರು-ರಾಶಿ-ನಕ್ಷತ್ರ ಸೇರಿಸಬಹುದು.

ಸೇವಾ ಮೊತ್ತ : ₹2500

ಪೂಜಾ ಸೇವೆ ನೋಂದಾಯಿಸಿ

💰 ದೇಣಿಗೆ

ನೀವು ಟ್ರಸ್ಟ್ಗೆ ದೇಣಿಗೆ ನೀಡಲು ಬಯಸಿದ್ದಲ್ಲಿ ದೇಣಿಗೆ ಆಯ್ಕೆ ಮಾಡುವುದರ ಮುಖಾಂತರ ವಿವರ ದಾಖಲಿಸಬಹುದು. ದೇಣಿಗೆಯನ್ನು ವಿಶೇಷ ಕಾರ್ಯಕ್ರಮಗಳಾದ ರುದ್ರಹೋಮ, ದೀಪಾರಾಧನೆ ಇತ್ಯಾದಿ ಅಥವಾ ದೈನಂದಿಕ ಇತರ ಖರ್ಚು ವೆಚ್ಚಗಳಿಗಾಗಿ ನೀಡಬಹುದು. ದೇಣಿಗೆಯ ಮೊತ್ತಕ್ಕೆ ಯಾವುದೇ ಮಿತಿಗಳು ಇರುವುದಿಲ್ಲ.

ವಿಶೇಷ ಸೂಚನೆ: ಭಕ್ತರು ದೇಣಿಗೆ ಅರ್ಜಿಯಲ್ಲಿ ತಮ್ಮ ವಿವರಗಳನ್ನು ನಮೂದಿಸಿದರೆ ಮಾತ್ರ ನಾವು ರಶೀದಿಯನ್ನು ನೀಡುತ್ತೇವೆ. ಭಕ್ತರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ತ್ವರಿತ ದೇಣಿಗೆ ಆಯ್ಕೆಯನ್ನು (ರಶೀದಿ ಇಲ್ಲದೆ) ಆರಿಸಿಕೊಳ್ಳಬಹುದು.

ದೇಣಿಗೆ ನೋಂದಾವಣೆ (ರಶೀದಿ ಸಹಿತ)

👥 ಸದಸ್ಯತ್ವ

ಟ್ರಸ್ಟ್ ನ ಸದಸ್ಯತ್ವ ವಿಶ್ವನಾಥಪುರ ಕುಟುಂಬದ ಸದಸ್ಯರಿಗೆ ಮಾತ್ರ ಮೀಸಲಾಗಿದೆ. ಕುಟುಂಬದ ಯಾವುದೇ ಸದಸ್ಯ ರೂ ೧೦೦೦ ಪಾವತಿಸಿ ಅಜೀವ ಸದಸ್ಯರಾಗಬಹುದು

ಸದಸ್ಯರಾಗಿ ಸೇರಿ

ವಿಳಾಸ

ವಿಶ್ವನಾಥಪುರ ಅಗ್ರಹಾರ, ಬೆಳವಿನಕೊಡಿಗೆ ಅಂಚೆ, ಭುವನಕೋಟೆ ಗ್ರಾಮ, ಕೊಪ್ಪ ತಾಲೂಕು, ಚಿಕ್ಕಮಗಳೂರು ಜಿಲ್ಲೆ - 577126
📞 9448645301 | ✉️ durgatrusts@gmail.com